Advertisement

ಪಕ್ಕದ ಮನೆ ಮಹಿಳೆ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಟೆಕ್ಕಿ ಅರೆಸ್ಟ್‌

[ad_1]

ಬೆಂಗಳೂರು ಮೇ 7: ತನ್ನ ನೆರೆಹೊರೆಯ ಮನೆ ಮಹಿಳೆಯು ಸ್ನಾನ ಮಾಡುವಾಗ ವಿಡಿಯೋ ಚಿತ್ರೀಕರಿಸುತ್ತಿದ್ದ ಆರೋಪದಲ್ಲಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬನನ್ನು ಮಹದೇವಪುರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

ಗುರಡುಚಾರ್‌ ಪಾಳ್ಯ ಸಮೀಪದ ನಿವಾಸಿ ಕಾರ್ತಿಕ್‌ ಬಂಧಿತ ವ್ಯಕ್ತಿ.

ಆರೋಪಿಯಿಂದ ಮೊಬೈಲ್‌ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಈತ ನೆರೆಮನೆಯ ಮಹಿಳೆ ಸ್ನಾನಗೃಹದಲ್ಲಿದ್ದಾಗ ತನ್ನ ಮನೆಯ ಕಿಟಕಿಯಿಂದ ಕಾರ್ತಿಕ್‌ ವಿಡಿಯೋ ಮಾಡಿದ್ದ. ಈ ಕುರಿತು ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿ ಕಾರ್ತಿಕ್‌ ಮೂಲತಃ ತಮಿಳುನಾಡು ರಾಜ್ಯದವನು. ಈತ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಬಾಣಂತನಕ್ಕೆ ಆತನ ಪತ್ನಿ ತವರಿಗೆ ಹೋಗಿದ್ದರು. ಇನ್ನು ಸಂತ್ರಸ್ತೆ ಕೂಡಾ ಸಾಫ್ಟ್‌ವೇರ್‌ ಉದ್ಯೋಗಿ. ಕೆಲ ತಿಂಗಳ ಹಿಂದಷ್ಟೇ ಕಾರ್ತಿಕ್‌ ಮನೆ ಪಕ್ಕದ ಮನೆಗೆ ಬಾಡಿಗೆಗೆ ಬಂದಿದ್ದರು. ಸ್ನಾನಗೃಹದ ಕಿಟಕಿ ಬಳಿ ಮನುಷ್ಯ ನೆರಳು ಕಂಡು ಸಂತ್ರಸ್ತೆಗೆ ಆತಂಕವಾಗಿದೆ. ಕೂಡಲೇ ಕಿರುಚಿದಾಗ ಕಾರ್ತಿಕ್‌ ಪರಾರಿಯಾಗಿದ್ದ. ಈ ಕುರಿತು ಕೂಡಲೇ ಪೊಲೀಸರಿಗೆ ಸಂತ್ರಸ್ತೆ ದೂರನ್ನು ನೀಡಿದ್ದರು ಎಂದು ವರದಿಯಾಗಿದೆ.

banner



[ad_2]

Source link

Leave a Reply

Your email address will not be published. Required fields are marked *