Advertisement

ಬಿಟ್‌ಕಾಯಿನ್‌ ಹಗರಣದಲ್ಲಿ ಮಹತ್ವದ ಬೆಳವಣಿಗೆ, ಶ್ರೀಕಿ ಸೇರಿ ಇಬ್ಬರ ಬಂಧನ

[ad_1]

ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಿಟ್‌ಕಾಯಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಇಡಿ ಮೂವರು ಪ್ರಮುಖ ಆರೋಪಿಗಳನ್ನು ಬಂಧನ ಮಾಡಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ರಾಬಿನ್‌ ಖಂಡೇವಾಲ ಹಾಗೂ ಸುನೀಶ್‌ ಹೆಗ್ಡೆಯನ್ನು ಬಂಧನ ಮಾಡಲಾಗಿದ್ದು, ನಿನ್ನೆ ರಾತ್ರಿ ಈ ಮೂವರನ್ನೂ ಇಡಿ ಅಧಿಕಾರಿಗಳು ಬಂಧನ ಮಾಡಿದ್ದಾರೆ.

ಇವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆಂದು ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಶ್ರೀಕಿ ಬಿಟ್‌ಕಾಯಿನ್‌ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಹ್ಯಾಕಿಂಗ್‌, ಡಿಜಿಟಲ್‌ ವಂಚನೆ, ಅಕ್ರಮ ಹಣ ವರ್ಗಾವಣೆ ಸಂಬಂಧ ಹಲವು ಗಂಭೀರ ಆರೋಪಗಳು ಈತನ ಮೇಲಿದೆ.

ಈ ಪ್ರಕರಣಕ್ಕೆ ಕುರಿತಂತೆ ಆರೋಪಿಗಳಾದ ಸುನೀಶ್‌ ಹೆಗ್ಡೆ ಹಾಗೂ ಪ್ರಸಿದ್ಧ ಶೆಟ್ಟಿ ಸೇರಿ ಇನ್ನಿತರರು ಎಪ್ರಿಲ್‌ ತಿಂಗಳಿನಲ್ಲಿ ತಮ್ಮ ವಿರುದ್ಧ ದಾಖಲು ಮಾಡಲಾಗಿರುವ ಹ್ಯಾಕಿಂಗ್‌ ಮತ್ತು ವಂಚನೆ ಪ್ರಕರಣಗಳನ್ನು ರದ್ದು ಮಾಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಇದು ವಿಚಾರಣೆಯ ಹಂತದಲ್ಲಿದೆ.



[ad_2]

Source link

Leave a Reply

Your email address will not be published. Required fields are marked *