Advertisement

10 ಲಕ್ಷ ಕೊಟ್ಟು NEET ಪ್ರಶ್ನೆ ಪತ್ರಿಕೆ ತಂದುಕೊಟ್ಟ ಅಪ್ಪ

[ad_1]

ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಮೇ 3ರಂದು ದೇಶಾದ್ಯಂತ ನಡೆದಿದ್ದ ನೀಟ್ ಯುಜಿ ಪರೀಕ್ಷೆಯನ್ನು ಕೇಂದ್ರ ಸರ್ಕಾರವು ರದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಎಷ್ಟೋ ಲಕ್ಷಾಂತರ ವಿದ್ಯಾರ್ಥಿಗಳ ಕನಸು ಭಗ್ನ ವಾದಂತಾಗಿದೆ. ಅಂತೆಯೇ ಇಲ್ಲೊಬ್ಬ ಅಪ್ಪ 10 ಲಕ್ಷ ರೂಪಾಯಿ ನೀಡಿ ತನ್ನ ಮಗನಿಗೆ NEET ಪ್ರಶ್ನೆಪತ್ರಿಕೆಯನ್ನು ತಂದು ಕೊಟ್ಟಿದ್ದಾನೆ. ಆದರೆ ಮಗ ಮಾತ್ರ ಗಳಿಸಿದ ಅಂಕ ಕೇಳಿದರೆ ಶಾಕ್ ಆಗುತ್ತೆ.

ನೀಟ್‌( NEET-UG 2026) ಪ್ರಶ್ನೆ ಪತ್ರಿಕೆ ಸೋರಿಕೆಗಾಗಿ 10 ಲಕ್ಷ ರೂಪಾಯಿ ನೀಡಿದ್ದ ದಿನೇಶ್ ಬಿವಾಲ್(Dinesh Biwal) ಎಂಬುವವರ ಮಗ, ಪರೀಕ್ಷೆಯಲ್ಲಿ ಕೇವಲ 107 ಅಂಕಗಳ ಪ್ರಶ್ನೆಗಳಿಗೆ ಮಾತ್ರ ಸರಿಯಾಗಿ ಉತ್ತರಿಸುವಲ್ಲಿ ಯಶಸ್ವಿಯಾಗಿದ್ದಾನೆ. ರಿಷಿ 12ನೇ ತರಗತಿಯನ್ನು ಗ್ರೇಸ್ ಅಂಕಗಳ (Grace Marks) ನೆರವಿನಿಂದ ಪಾಸು ಮಾಡಿದ್ದನು. ಹೌದು, ರಿಷಿ ಬಿವಾಲ್ ಅವರ ಅಂಕಪಟ್ಟಿ (Marksheet) ಅಂತರ್ಜಾಲದಲ್ಲಿ ಹರಿದಾಡುತ್ತಿರುವುದರಿಂದ ನೀಟ್ ಹಗರಣದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಆತ ಗ್ರೇಸ್ ಅಂಕಗಳ ಸಹಾಯದಿಂದ 12ನೇ ತರಗತಿ ಪಾಸ್ ಆಗಿರುವುದು ಇದರಲ್ಲಿ ಬಹಿರಂಗವಾಗಿದೆ.

ಒಟ್ಟಾರೆ ಪರೀಕ್ಷಾ ಪತ್ರಿಕೆಯನ್ನು ಮುಂಚಿತವಾಗಿಯೇ ಪಡೆಯಲು ಲಕ್ಷಾಂತರ ರೂಪಾಯಿ ಹಣ ನೀಡಲಾಗಿತ್ತಾದರೂ, ಮಗ ಪರೀಕ್ಷೆಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲನಾಗಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.



[ad_2]

Source link

Leave a Reply

Your email address will not be published. Required fields are marked *