Advertisement

ಪತಿಯ ವರದಕ್ಷಿಣೆ ಕಿರುಕಳಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ

[ad_1]

ಬೆಳ್ತಂಗಡಿ: ಕುಡಿದು ಬಂದು ಪ್ರತಿದಿನ ಪತಿ ನೀಡುತ್ತಿದ್ದ ಕಿರುಕಳಕ್ಕೆ ಬೆಸತ್ತು ಮನನೊಂದು ಪತ್ನಿ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾರೆಂಕಿ ಗ್ರಾಮದ ಬಂಗೇರಕಟ್ಟ ದೋಟ ಎಂಬಲ್ಲಿ ಮೇ.15 ರಂದು ನಡೆದಿದೆ.

ಮೃತಪಟ್ಟ ಮಹಿಳೆ ಸಂದ್ಯಾ (ವ.27) ಆಗಿದ್ದು ಅವರ ಸಹೋದರ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಮೇ. 16 ರಂದು ದೂರು ನೀಡಿದ್ದು ಪತಿ ಧನಂಜಯ್ ಮೇಲೆ ವರದಕ್ಷಿಣೆ ನಿಷೇಧ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು ಆತನನ್ನು ಪೊಲೀಸರು ಮೇ. 17 ರಂದು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಸಂದ್ಯಾ ರನ್ನು ಮೂರು ವರ್ಷದ ಹಿಂದೆ ಬೆಳ್ತಂಗಡಿ ತಾಲೂಕು ಪಾರೆಂಕಿ ಗ್ರಾಮದ ದೋಟ ವಾಸಿ ಧನಂಜಯ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದು ಈ ದಂಪತಿಗೆ 1 ವರ್ಷ 7 ತಿಂಗಳ ಹೆಣ್ಣು ಮಗು ಇದೆ. ಧನಂಜಯ ಪ್ರತೀ ದಿನ ಮದ್ಯಪಾನ ಮಾಡುತ್ತಿದ್ದು ಈ ಬಗ್ಗೆ ಮೃತ ಸಂದ್ಯಾ ಆಕೆಯ ತಾಯಿಗೆ ಕರೆ ಮಾಡಿ ಗಂಡ ಪ್ರತಿ ನಿತ್ಯ ಮದ್ಯಪಾನ ಮಾಡಿ ಚಿನ್ನ ಆಭರಣ ಮತ್ತು ಹಣ ನೀಡಬೇಕೆಂದು ಕಿರುಕುಳ ನೀಡುತ್ತಿರುವುದಾಗಿ ತಿಳಿಸುತ್ತಿದ್ದಳು.

ಈ ಬಗ್ಗೆ ತಾಯಿ ಇವತ್ತಲ್ಲಾ ನಾಳೆಯಾದರೂ ಸರಿಯಾಗ ಬಹುದೆಂದು ತಿಳಿದು ಸಮಾಧಾನ ಮಾಡುತ್ತಿದ್ದರು. ಮೇ. 15 ರಂದು ರಾತ್ರಿ ಸುಮಾರು 09:00 ಗಂಟೆಗೆ ಸಂದ್ಯಾಳು ತನ್ನ ತಾಯಿಗೆ ಕರೆ ಮಾಡಿ ಇನ್ನು ಮುಂದೆ ನನ್ನ ಮಗುವನ್ನು ನೀವೇ ನೋಡಿಕೊಳ್ಳಿ ನನ್ನ ಜೀವನ ಮುಗಿದಂತೆ ಎಂದು ಕರೆ ಮಾಡಿ ತಿಳಿಸಿದ್ದರು.

banner

ತದನಂತರ ಆಕೆಯ ಮೊಬೈಲ್‌ಗೆ ಕರೆ ಮಾಡಿದಾಗ ನೆರೆಯವರು ಯಾರೋ ಮೊಬೈಲ್ ರಿಸೀವ್ ಮಾಡಿ ಅವರು ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಆಕೆಯನ್ನು ಆಂಬುಲೆನ್ಸಲ್ಲಿ ಬಂಟ್ವಾಳ ಆಸ್ಪತ್ರೆಗೆ ಕರೆಕೊಂಡು ಧನಂಜಯ್ ಹೋಗಿರುವ ವಿಚಾರ ತಿಳಿದು ತಕ್ಷಣವೇ ಆಸ್ಪತ್ರೆಗೆ ಹೋದಾಗ ಸಂಧ್ಯಾಳನ್ನು ಪರೀಕ್ಷಿಸಿದ ವೈದ್ಯರು ಈಕೆ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ವಿಚಾರ ತಿಳಿಸಿರುತ್ತಾರೆ.

ಮೃತ ಸಂಧ್ಯಾ ಎಂಬವರು ಆಕೆಯ ಗಂಡನ ಕಿರುಕುಳದಿಂದ ಅಥವಾ ಇನ್ಯಾವುದೋ ಉದ್ದೇಶದಿಂದ ಜೀವನದಲ್ಲಿ ಜಿಗುಪ್ಪೆ ಗೊಂಡು ಮನನೊಂದು ಮೇ 15 ರಂದು ರಾತ್ರಿ 09:00 ಗಂಟೆಯಿ0ದ 10:15 ರ ಮದ್ಯ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಇವರ ಮರಣದ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಬೇಕೆಂದ ಮೃತಪಟ್ಟ ಸಂದ್ಯಾರ ಸಹೋದರ ಬಂಟ್ವಾಳ ತಾಲೂಕಿನ ಸಜೀಪಮೂಡು ಕೋಮಲಿ ನಿವಾಸಿ ಸಂದೀಪ್ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸರು ವರದಕ್ಷಿಣೆ ನಿಷೇಧ ಕಾಯಿದೆ ಅಡಿ, ಬಿಎನ್‌ಎಸ್ ಅಕ್ರಂ 80,85, ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



[ad_2]

Source link

Leave a Reply

Your email address will not be published. Required fields are marked *