Advertisement

ವಿವಾಹ ವಿಚ್ಚೇದನ ನೀಡುವಂತೆ ಒತ್ತಾಯಿಸಿ ಕಿರುಕುಳ, ದೂರು ದಾಖಲು

[ad_1]

ಪುತ್ತೂರು: ವಿವಾಹಿತ ಮಹಿಳೆಯೋರ್ವರಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿ ವಿವಾಹ ವಿಚ್ಛೇದನ ನೀಡುವಂತೆ ಒತ್ತಾಯಿಸಿದ ಕುರಿತ ದೂರು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿಡ್ನಳ್ಳಿಯ ಸಂಶೀನ ಎಂಬವರು ದೂರು ನೀಡಿದವರು. ಅವರಿಗೆ 2021ರಲ್ಲಿ ಸುಳ್ಯದ ಮಹಮ್ಮದ್ ರಫಿಕ್ ಎಂಬವರೊಂದಿಗೆ ವಿವಾಹವಾಗಿತ್ತು. ವಿವಾಹದ ಬಳಿಕ ಅವರ ಗಂಡ 4 ವರ್ಷಗಳ ಕಾಲ ವಿದೇಶದಲ್ಲಿದ್ದು, 2025ನೇ ವರ್ಷದ ನವೆಂಬ‌ರ್ ತಿಂಗಳಲ್ಲಿ ಊರಿಗೆ ಮರಳಿದ್ದರು.

2025ನೇ ನವೆಂಬರ್ ತಿಂಗಳಲ್ಲಿ ಮಹಮ್ಮದ್ ರಫಿಕ್ ಅವರು ಎರ್ನಾಕುಲಂ ಎಂಬಲ್ಲಿ ಕೆಲಸಕ್ಕೆ ಹೋದವರು 2026ರ ಜ.25ಕ್ಕೆ ವಾಪಾಸಾಗಿದ್ದರು. ಹಾಗೆ ಬಂದವರು ಪತ್ನಿಗೆ ಹಲ್ಲೆ ನಡಿಸಿದ್ದಾರೆ. ಇದರ ಜೊತೆಗೆ ನಾದಿನಿ ನಸೀಮಾ ಎಂಬವರು ಕೂಡಾ ಕಿರುಕುಳ ನೀಡಿ ನನ್ನ ಸಹೋದರನಿಗೆ ನೀನು ಡೈವರ್ಸ್ ನೀಡು ಎಂದು ಒತ್ತಾಯಿಸಿದ್ದಾರೆ.

ಮನೆಯ ಈ ಘಟನೆಗಳು ಇಂದಲ್ಲ ನಾಳೆ ಸರಿ ಹೋಗಬಹುದು ಎಂಬ ಉದ್ದೇಶದಿಂದ ಸಂಶೀನ ಅವರು ಪೊಲೀಸರಿಗೆ ದೂರು ನೀಡಿರಲಿಲ್ಲ. ಇದೀಗ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

banner



[ad_2]

Source link

Leave a Reply

Your email address will not be published. Required fields are marked *